As You See It (ನೀವು ನೋಡಿದಂತೆ)

universal god
universal god

As You See It (ನೀವು ನೋಡಿದಂತೆ)

ಬೆಂಗಳೂರು ನಗರದ ಒಂದು ಸೋಸೈಟಿಯಲ್ಲಿ ಚಲುವಯ್ಯ ಎಂಬ ವೃದ್ಧರು ಒಬ್ಬರೇ ವಾಸಿಸುತ್ತಿದ್ದರು. ಅವರೊಡನೆ ಕುಟುಂಬದ ಯಾರೂ ಇರಲಿಲ್ಲ. ಅವರು ಒಬ್ಬ ಸ್ನೇಹಪರ ವ್ಯಕ್ತಿಯಾಗಿದ್ದು, ಪ್ರತಿಯೊಬ್ಬರ ಜೊತೆ ಮಾತನಾಡಿ, ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದರು. ಅತ್ತಿಂದಿತ್ತ ಎಲ್ಲರಿಗೂ ಮೆಚ್ಚುಗೆಯ ವ್ಯಕ್ತಿಯಾಗಿದ್ದ ಅವರು ಶ್ರೀಕೃಷ್ಣನ ದೊಡ್ಡ ಭಕ್ತರು. ಅವರ ದಿನ ಪ್ರಾರ್ಥನೆಯಿಂದ ಪ್ರಾರಂಭವಾಗುತ್ತಿತ್ತು ಮತ್ತು ನಿದ್ರೆಗೆ ಹೋಗುವ ಮುನ್ನ ಪ್ರಾರ್ಥನೆ ಮೂಲಕವೇ ಮುಕ್ತಾಯವಾಗುತ್ತಿತ್ತು. ಅವರು ಭಾಗವದ್ಗೀತೆಯಲ್ಲಿ ಹೇಳಿರುವ ನಿಷ್ಠೆ, ವಿನಯಶೀಲತೆ ಮತ್ತು ದಯೆಯ ಮಾರ್ಗವನ್ನು ನಂಬಿ ಅನುಸರಿಸುತ್ತಿದ್ದರು. ಅವರು ಒಬ್ಬರೇ ಇದ್ದಾಗ ದೇವರೊಂದಿಗೆ ಮಾತನಾಡುತ್ತಿದ್ದರು, ಮತ್ತು ಶ್ರೀಕೃಷ್ಣನನ್ನು "ಕಿಟ್ಟಪ್ಪ" ಎಂದು ಪ್ರೀತಿಯಿಂದ ಕರೆಯುತ್ತಿದ್ದರು.

ಒಂದು ದಿನ, ಮುಂಜಾನೆ ಒಬ್ಬ ಯುವಕ ಚೆಲುವಯ್ಯನ ಮನೆಗೆ ಬಂದು, ಅವರಿಗೆ 100ನೇ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳಿ, ಒಂದು ಉಡುಗೊರೆಯನ್ನು ಕೊಟ್ಟನು. ಈ ಸುದ್ದಿ ಕೆಲವೇ ಗಂಟೆಗಳಲ್ಲಿ ಆ ಆವರಣದಾದ್ಯಂತ ಹರಡಿತು. ಆ ದಿನದ ಪೂರಾ ಜನರು ಚೆಲುವಯ್ಯನನ್ನು ಭೇಟಿಯಾಗಿ ಶುಭಾಶಯಗಳನ್ನು ತಿಳಿಸತೊಡಗಿದರು. reels ಮತ್ತು videos ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಲು ಬಿಸಿ ಬಿಸಿ ಆಗಿದ್ದರು.

ಸಂಜೆಯವರೆಗೆ ಮನೆ ತುಂಬಾ ಹಬ್ಬದ ವಾತಾವರಣದಿಂದ ಕಂಗೊಳಿಸುತ್ತಿತ್ತು. ಆದರೆ ಎಲ್ಲರೂ ಹೋಗಿ ಬಿಟ್ಟ ನಂತರ, ಮನೆಯು ತಕ್ಷಣವೇ ಮೌನವಾಗಿ ಹೋಗಿತು. ಬೆಳಗ್ಗೆಯಿಂದ ಎಲ್ಲಾ ಜೊತೆಯಲ್ಲಿ ಮಾತನಾಡುತ್ತ, ನಗುತ್ತ, ಚೆಲುವಯ್ಯರು ಕಾಣುತ್ತಿದ್ದರೂ, ಅವರ ಹೃದಯದಲ್ಲಿ ದುಃಖವಾಗಿತ್ತು. ಏಕೆಂದರೆ ಅವರಿಗೆ ಗೊತ್ತಿತ್ತು, ಈ ಸಡಗರ ಎಲ್ಲವೂ ತಾತ್ಕಾಲಿಕವೇ. ಒಳಗಿಂದ ಆಳವಾದ ನಿಟ್ಟುಸಿರು ಬಿಟ್ಟು, ಅವರು ತಮ್ಮ ಮೆಚ್ಚಿನ ಸ್ಥಳವಾದ Terrace ಗೆ ಹೋದರು. ಹಠಾತ್‌ ಆಗಿ ಒಂದು ಚಿಕ್ಕ ಹುಡುಗನು ಚಲುವಯ್ಯನ ಹತ್ತಿರ ಬಂದು ಅವನನ್ನು "ಚೆಲುವಯ್ಯ" ಎಂದು ಕರೆದ.

ಚೆಲುವಯ್ಯನ ಅಚ್ಚರಿಯಿಂದ ಬಾಲಕನನ್ನು ಕೇಳಿದರು, "ನೀನು ಇಲ್ಲಿ ಹೇಗೆ ಬಂದೆ? ನಾನು ಮನೆಯ ಬಾಗಿಲು ಮುಚ್ಚಿ ಹಾಕಿದ್ದೆ!"

ಬಾಲಕ ನಗುತ್ತಾ ಉತ್ತರಿಸಿದ, "ನೀನು ಜೀವನದಲ್ಲಿ ಎಷ್ಟೋ ಬಾರಿ ನನ್ನನ್ನು ಕರೆಯಿದ್ದೀಯ. ಆದುದರಿಂದ ನಾನು ಒಮ್ಮೆಯಾದರೂ ನೋಡಬೇಕೆಂದು ಬಂದಿದ್ದೇನೆ. ನಾನು ಕಿಟ್ಟಪ್ಪ!"

ಚೆಲುವಯ್ಯನ ವ್ಯಂಗ್ಯವಾಗಿ ನಗುತ, "ಹೌದು, ದೇವರು ನೆಲಗಿಳಿದು ನನ್ನೊಂದಿಗೆ ಮಾತನಾಡಲು ಬಂದಿದ್ದಾರೆ, ಅಲ್ವಾ?" ಎಂದರು.

ಅದಕ್ಕೆ ಬಾಲಕ ತಕ್ಷಣ ಉತ್ತರಿಸಿದ:

"ನನ್ನ ಮಾತುಗಳನ್ನು ನಂಬಿ, ನನಗೆ ಹಳೆಯ ಗೆಳೆಯನಂತೆ ಮಾತನಾಡಲು ಅವಕಾಶ ಕೊಡಬಹುದಲ್ಲ."

ಚೆಲುವಯ್ಯ ನಿಟ್ಟುಸಿರು ಬಿಟ್ಟು, ಸುಂದರವಾದ ಸೂರ್ಯಾಸ್ತ ದೃಶ್ಯವನ್ನು, ಮೋಡಗಳಿಂದ ಹೊದಿದ ಆಕಾಶವನ್ನು ನೋಡುತ್ತ, "ಸರಿ, ನಿನ್ನು ಕಿಟ್ಟಪ್ಪ ಎಂದು ಊಹಿಸೋಣ," ಎಂದರು.

ಬಾಲಕ ತಕ್ಷಣವೇ ಕೇಳಿದ, "ಚೆಲುವಯ್ಯ, ಏಕೆ ಅಷ್ಟು ನಿಟ್ಟುಸಿರು? ಏನಾಯ್ತು? ನೂರು ವರ್ಷಗಳ ಈ ಪ್ರಯಾಣವನ್ನು ಹೇಗೆ ಅನುಭವಿಸುತ್ತಿದ್ದೀರಿ?"

ಚೆಲುವಯ್ಯ ಕಿಟ್ಟಪ್ಪನ ಕಡೆ ತಿರುಗಿ, ಹೇಳಿದರು, "ಏನು ಹೇಳಲಿ ಕಿಟ್ಟಪ್ಪ... ಈ ಜೀವನವೇ ಬದಲಾಗಿದೆ. ನಾನೊಂದು ದೀರ್ಘ ಜೀವನವನ್ನೇ ಬಾಳಿದ್ದೇನೆ. ನನ್ನ ಹತ್ತಿರವಾದ ಪ್ರೀತಿಪಾತ್ರರು ಜಗತ್ತನ್ನು ಬಿಟ್ಟಿದ್ದಾರೆ ಅಥವಾ ನನ್ನನ್ನು ಬಿಟ್ಟುಹೋದರು.

ನಾವೆಲ್ಲಾ ಬೆಳೆ ಬೆಳೆದು ಹೊಟ್ಟೆತುಂಬಿಕೊಂಡ ಅವಸ್ಥೆಯಿಂದ, ಇಂದಿನ ಪೋರರು ಕೆಲಸವಿಲ್ಲದೆ ಅಲೆಮಾರಿಯಾಗಿ ಕಳೆದುಹೋಗುತ್ತಿದ್ದಾರೆ.

ನಾನು ಚಿಕ್ಕವನಾಗಿದ್ದಾಗ, ನನ್ನ ಅಪ್ಪ-ಅಮ್ಮ ಅನೆಕ ವಿಷಯಗಳಲ್ಲಿ ನನ್ನನ್ನು ತಡೆಯುತ್ತಿದ್ದರು, ನನ್ನ ಮಾತುಗಳಿಗೆ ತಾತ್ಸಾರದಿಂದ ವಾದ ಮಾಡುತ್ತಿದ್ದರು. ನಂತರ ನಾನು ದೊಡ್ಡವನಾದಾಗ ನನ್ನ ಮಕ್ಕಳೇ ನನ್ನೊಂದಿಗೆ ವಾದಿಸಿ, ನನ್ನನ್ನು ಏಕಾಂಗಿ ಮಾಡಿದರು.

ಮೊದಲು ಜನರು ಮನೆ ಹೊರಗೆ ಕೂತು, ಬದುಕಿನ ಬಗ್ಗೆ ಹಂಚಿಕೊಳ್ಳುತ್ತಿದ್ದರು. ಈಗ ತಂತ್ರಜ್ಞಾನ ಮುನ್ನೆಟ್ಟಿದರೂ, ಯಾರಿಗೂ ಮಾತನಾಡಲು ಸಮಯವೇ ಇಲ್ಲ.

ಮೊದಲು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಗಳಿಂದ ಸಮಾಜದ ಬದಲಾವಣೆಗೆ ಮಾರ್ಗ ಕಲ್ಪಿಸುತ್ತಿದ್ದರು. ಆದರೆ ಈಗಿನ ಕಾಲ, ಎಲ್ಲ ಜಗತ್ತು ನೋಡೋದು ನಿಷ್ಕಾರಣ ಹಾಸ್ಯದ ಪ್ರಾಂಕ್ಸ್, ಅರ್ಥವಿಲ್ಲದ ಚರ್ಚೆಗಳು. ಅದು ಖಾಲಿ ವಾದ-ವಿವಾದಗಳಿಂದಲೂ ಅಥವಾ ಸುಳ್ಳು ಸುದ್ದಿಗಳಿಂದಲೂ ತುಂಬಿದೆ.

ಒಮ್ಮೊಮ್ಮೆ ನಾನು ಹಸಿರು ಮರಗಳ ತಾಜಾ ಗಾಳಿ ಉಸಿರಾಟ ಮಾಡುತ್ತಾ, ಮೋಡಗಳಿಂದ ತುಂಬಿದ ಆಕಾಶವನ್ನು ನೋಡುತ್ತಿದ್ದೆ. ಈಗ, ಆ ದೃಶ್ಯವನ್ನು ನೋಡುವುದಕ್ಕೂ ನಾನು ಮನೆ ಟೆರೆಸ್ಗೆ ಬಂದು ನಿಂತು ನೋಡಬೇಕಾಗಿದೆ."

ಕಿಟ್ಟಪ್ಪ ನಗುತ್ತಾ ಹೇಳಿದ, "ಚೆಲುವಯ್ಯ, ನೀನು ನಿಜಕ್ಕೂ ಬಹಳ ಭಿನ್ನಕಾಲಗಳನ್ನು ಕಂಡಿದ್ದೀಯ. ಆದರೆ ಎಲ್ಲ ಬದಲಾವಣೆಯೂ ಕೆಟ್ಟದಾಗಿಯೇ ಇರಬೇಕೆಂದು ಅಲ್ಲ. ನೀನು ಆ ಕ್ಷಣವನ್ನು ಹೇಗೆ ನೋಡುತ್ತೀಯೋ ಅದರಿಂದಲೇ ಅದರ ಅರ್ಥ ನಿರ್ಧಾರವಾಗುತ್ತದೆ.

ಹೌದು, ಇಂದಿನ ಯುವಕರು ಕೆಲಸವಿಲ್ಲದೆ ತಿರುಗಾಡುತ್ತಿದ್ದಾರೆ ಅನ್ನುವುದು ಸತ್ಯ, ಆದರೆ ಎಲ್ಲರೂ ಅಲ್ಲ. ಕೆಲವು ಯುವಕರು ನಿಸ್ಸೀಮ ಶ್ರಮ ಪಡುತ್ತಿದ್ದು, ಅವರ ಸಂಶೋಧನೆಗಳು ಅನೇಕ ಜನರ ಜೀವನಕ್ಕೆ ಸಹಾಯಕವಾಗುತ್ತಿವೆ.

ನಿನ್ನ ಅಪ್ಪ-ಅಮ್ಮನವರು ನಿನ್ನನ್ನು ಕಟ್ಟುಹಾಕಿದ್ದರು, ಆದರೆ ನೀನು ನಿನ್ನ ತಂದೆಯ ತೊಡೆ ಮೇಲೆ ಕುಳಿತಿದ್ದ ಸಂತೋಷವನ್ನು, ಅವರ ಪ್ರೀತಿಯ ಭಾಗ್ಯವನ್ನು ಮರೆತಿದ್ದೀಯ. ಅವರು ನಿನ್ನ ಹಿತಕ್ಕಾಗಿ ನಿಯಮಗಳನ್ನು ತೋರಿದರು. ನೀನು ನಿನ್ನ ಅಪ್ಪ-ಅಮ್ಮನ ಮಾತುಗಳನ್ನು ಪಾಲಿಸಿ, ನಿನ್ನ ಆಸೆಗಳನ್ನೇ ಬಲಿಯೆಸಿದ್ದೀಯೆಂದರೆ, ಅದೇ ಪಥವನ್ನು ನಿನ್ನ ಮಕ್ಕಳು ಅನುಸರಿಸಬೇಕೆಂಬುದಿಲ್ಲ. ನೀನು ಅವರ ಬೆಳವಣಿಗೆಯ ಪ್ರತಿನಿಮಿಷವನ್ನು ಆನಂದಿಸಿದ್ದೆ, ಹೆಮ್ಮೆಪಟ್ಟಿದ್ದೆ. ಆದರೆ, ಅವರು ನಿನಗೆ ಅರ್ಥಮಾಡಿಸಲು ಪ್ರಯತ್ನಿಸಿದಾಗ, ನೀನು ಅವರ ಮಾತು ಕೇಳಲಿಲ್ಲ.

ಚೆಲುವಯ್ಯ ಕಿಟ್ಟಪ್ಪನ ಮಾತುಗಳನ್ನು ಕೇಳಿ ತನ್ನ ಮಕ್ಕಳೊಡನೆ ಕಳೆದ ಸುಂದರ ಕ್ಷಣಗಳನ್ನೂ, ತನ್ನ ಬಾಲ್ಯದ ನೆನಪುಗಳನ್ನೂ ಸ್ಮರಿಸುತ್ತಿದ್ದರು.

ಕಿಟ್ಟಪ್ಪ ತನ್ನ ಮಾತು ಮುಂದುವರಿಸಿದರು: "ಸಂಬಂಧ ಮತ್ತು ಮಾತುಕತೆ ಈಗ ಬದಲಾದರೂ, ಸಾಮಾಜಿಕ ಜಾಲತಾಣಗಳು ಈಗಲೂ ಜನರನ್ನು ಹತ್ತಿರಗೊಳಿಸಲು ಅವಕಾಶ ಕೊಡುತ್ತಿವೆ. ಹಿಂದಿನ ಕಾಲದಂತೆ ಹೊರಗಡೆ ಕುಳಿತು ಮಾತನಾಡಲು ಸಾಧ್ಯವಿಲ್ಲದಿದ್ದರೂ, ಈಗ ಮನೆಯಲ್ಲಿ ಕುಟುಂಬದೊಂದಿಗೆ ಸಮಯವನ್ನು ಕಳೆಯುವ ಅವಕಾಶವನ್ನು ಸಾಕಷ್ಟು ಜನರು ಹುಡುಕುತ್ತಿದ್ದಾರೆ.

ಮಾಧ್ಯಮದ ಬದಲಾವಣೆಗಳ ಬಗ್ಗೆ ನಿನಗೆ ತೊಂದರೆಯಾಗಬಹುದು, ಆದರೆ ಏನು ಬೇಕಾದರೂ ಬೇರೆಯ ನೋಟಗಳಿಂದ ಇಂದಿನ ಪ್ರಪಂಚದ ಬಗ್ಗೆ ಗೊತ್ತಾಗುತ್ತದೆ. ಆದರೆ ಈಗಲೂ ನಿಖರವಾದ ಮಾಹಿತಿಯನ್ನು ಹುಡುಕಲು ಮತ್ತು ಅರ್ಥಮಾಡಿಕೊಳ್ಳಲು ನಾವೇ ಜವಾಬ್ದಾರರು.

ನೀನು ಹಸಿರು ಗಾಳಿ ಮತ್ತು ಪ್ರಕೃತಿಯ ಶುದ್ಧತೆಯನ್ನು ಮಿಸ್ಸಾಗುತ್ತೀಯೆ ಎಂದು ಹೇಳುತ್ತಿದ್ದೀಯ. ಆದರೆ, ನಿನ್ನ ನಗರ ಕಟ್ಟಡಗಳಿಂದ ತುಂಬಿದರೂ ಸಹ, ನೀನು ಪ್ರತಿದಿನವೂ ಈ ಸುಂದರ ದೃಶ್ಯವನ್ನು ನೋಡುವ ಸಾಧ್ಯತೆಯನ್ನು ಮರೆತಿದ್ದೀಯ.

ನೀನು ನನ್ನನ್ನು ಪ್ರೀತಿಯಿಂದ, ನಂಬಿಕೆಯಿಂದ ಕರೆಯುತ್ತಿದ್ದಿದ್ದಕ್ಕಾಗಿ, ನಿನ್ನ ಒಳ್ಳೆಯತನ ಮತ್ತು ಅನುಪಮ ಭಕ್ತಿಯಿಂದಾಗಿ ನಾನು ನಿನ್ನ ಬಳಿಗೆ ಬಂದೆ. ನಾನು ನಿನ್ನ ಕಿಟ್ಟಪ್ಪ ಎಂದು ಹೇಳಿದ್ದರೂ, ನಿನ್ನ ದೃಷ್ಟಿಕೋನದಿಂದ ಅಂಧನಾಗಿ ನಿಜವನ್ನು ಸ್ವೀಕರಿಸಲಿಲ್ಲ" ಎಂದು ಕಿಟ್ಟಪ್ಪ ಮಾತು ಮುಗಿಸಿದಾಗ, ಚಾಲುವಯ್ಯ ಆ ತಾತ್ವಿಕ ಮಾತುಗಳಲ್ಲಿ ಆಳವಾದ ಚಿಂತನೆಯಲ್ಲಿ ಮುಳುಗಿದರು.

ಕಿಟ್ಟಪ್ಪನ ಕೊನೆಯ ವಾಕ್ಯವನ್ನು ಕೇಳುವಷ್ಟರಲ್ಲೇ, ಇದು ನಿಜವಾಗಿಯೂ ತನ್ನ ಪ್ರಿಯ ದೇವರಾದ ಕಿಟ್ಟಪ್ಪನ ಜೊತೆಗೆ ನಡೆದ ಸಂಭಾಷಣೆಯಾಗಿರುವುದು ಚೆಲುವಯ್ಯನಿಗೆ ತಿಳಿಯಿತು. ಅವರು ತಕ್ಷಣವೇ ತಿರುಗಿ ನೋಡಿದರು. ಆದರೆ ಅಷ್ಟರಲ್ಲಿ ಕಿಟ್ಟಪ್ಪ ಅಲ್ಲಿಂದ ಮಾಯವಾಗಿದ್ದರು. ಕಿಟ್ಟಪ್ಪನ ಮಾತುಗಳು ಚೆಲುವಯ್ಯನ ಹೃದಯವನ್ನು ತಲುಪಿದವು. ನಿಜವನ್ನು ನೋಡಲು ಯತ್ನಿಸದೇ ಇರುವುದರಿಂದ ನಡೆದ ದುಃಖ ಅವರು ಅನುಭವಿಸಿದರು. ತಮ್ಮ ಜೀವನದ ಎಲ್ಲ ಅನುಭವಗಳನ್ನು ಪುನರ್ವಿಚಾರಿಸಲು ಚೆಲುವಯ್ಯ ಪ್ರಾರಂಭಿಸಿದರು.

ಅವರು ತುಂಬಾ ಕೃತಜ್ಞತೆಯನ್ನು ವ್ಯಕ್ತಪಡಿಸಿದರು, ಏಕೆಂದರೆ ಅವರ ದೇವರಾದ ಕಿಟ್ಟಪ್ಪ ಅವರ ಬಳಿ ಬಂದು, ಅವರ ದೃಷ್ಟಿಯನ್ನು ಬೆಳಗಿಸಿ, ಹೊಸ ನಿಲುವನ್ನು ನೀಡಿದ್ದರು.

Your reviews and support means alot.