Best 10 kannada kavanagalu - Celebrating Kannada poetry
Immerse yourself in the melodies of top kannda kavithegalu
1. ನೀನೊಂದು ಅದ್ಭುತ ಮಾಯೆ
ನಿನ್ನ ನೆನಪುಗಳ ರಾಶಿಯಲ್ಲಿ ನನ್ನ ಖುಷಿಯನ್ನು ನೋಡಿದೆ,
ನಿನ್ನ ಮಾತಿನ ಸಾಲಿನಲ್ಲಿ ನನ್ನ ಜೀವನ ಮೂಡಿದೆ,
ನೀನು ನನ್ನ ಹೆಸರನ್ನು ಕರೆಯುವ ರೀತಿ ನನಗೆ ಇಷ್ಟ,
ನನ್ನ ಸೆಳೆಯುವ ನಿನ್ನ ಮಿಂಚಿನ ಕಣ್ಣುಗಳು ನನಗೆ ಇಷ್ಟ.
ನನಗೆ ತಿಳಿಯದೆ ನೀ ಹೆಜ್ಜೆ ಇಟ್ಟೆ ನನ್ನ ಮನದಲ್ಲಿ,
ಕೈಯನು ಹಿಡಿದು ನನ್ನನು ನಡೆಸಿದೆ ಈ ಅದ್ಭುತ ಮಾಯೆಯಲ್ಲಿ,
ನಾನು ಮರೆತೆ ನನ್ನ ನೋವನು ನಿನ್ನ ಮಡಿಲಲ್ಲಿ,
ಬಯಸಿದೆ ಕೊನೆಯ ವರೆಗೂ ಇರಲು ನಿನ್ನ ಜೊತೆಯಲ್ಲಿ.
2. ಮೂಕ ಭಾವನೆಗಳು
ನೋಡಿದೆವು ರಂಗು ಬದಲಿಸುವ ಮುಖವಾಡದ ಜನರನ್ನು,
ಕೇಳಿದೆವು ಮೋಸಮಾಡುವವರ ಸಿಹಿಯಾದ ಮಾತುಗಳನ್ನು,
ಹೇಳಲು ಸಾಧ್ಯವೇ ಇಲ್ಲ, ಯಾವುದು ಸತ್ಯ ಯಾವುದು ಸುಳ್ಳು.
ಶಾಶ್ವತ ಯಾವುದೂ ಇಲ್ಲ, ಆಗುವುದು ಕೊನೆಗೆ ಎಲ್ಲಾ ಮರಳು.
ಜ್ಞಾನದ ಹೆಸರಿನಲ್ಲಿ ಭಕ್ತಿಯನ್ನು ಮರೆತರು,
ಹಣದ ದುರಾಸೆಯಲ್ಲಿ ಪ್ರೀತಿಯನ್ನು ಕಳೆದುಕೊಂಡರು,
ಯಶಸ್ಸಿನ ಹೆಸರಿನಲ್ಲಿ ಮನುಜ ಘನತೆಯನ್ನು ಬಿಟ್ಟರು,
ನಿಜವಾದ ಮೂಕ ಭಾವನೆಗಳೊಂದಿಗೆ ಕೆಲವರು ಮಾತ್ರ ಉಳಿದ್ದರು.
3. ಅಮ್ಮ, ನಿನ್ನ ಕಂದ
ರಕ್ಷಿಸಿದೆ ನಿನ್ನ ಕಂದನನ್ನು, ಈ ಕ್ರೂರವಾದ ಜಗದಿಂದ,
ಮಡಿಲಲ್ಲಿ ಕುಂತ ನಾನು ನೋಡಲಿಲ್ಲ ಭಾರ ನಿನ್ನ ಬೆನ್ನ ಹಿಂದೆ,
ಅದೃಷ್ಟವಂತ ನಾನು, ಸಿಗುವುದು ನಿನ್ನ ಮಮಕಾರದ ತುತ್ತು,
ಮೋಹ ಮಾಯಾದಿಂದ ಕುರುಡಾದ ನನಗೆ, ನೀನಿಲ್ಲದ ಜೀವನವೇ ಬೇಕಿತ್ತು,
ಲೋಕವೇ ಮೋಸಹೋಗಿದೆ ನನ್ನ ನಗುವ ಮುಗವ ನೋಡಿ,
ಆದರೆ ನೀನು ಕೇಳಿದೆ ನನ್ನ ದುಃಖವನೂ ನನ್ನ ಕಣ್ಣು ನೋಡಿ,
ತಾಯಿಯ ಪ್ರೀತಿಯ ಬೆಳಕು ಮರುಗಿದೆ ಮನದ ಕತ್ತಲೆಯಲ್ಲಿ,
ಪ್ರೀತಿಯ ಬಂಧನದಲ್ಲಿ ಬಾಳುತ್ತಾ ತಾಯಿಯ ಪಾಲನೆಯಲ್ಲಿ.
4. ಅವನ ಸ್ನೇಹ
ಅಮ್ಮ ಹೇಳುವರು ಅವನು ನನ್ನ ಮಗನು ಎಂದು,
ಎಲ್ಲೆಲ್ಲಿಯೂ ಕಂಡಿಲ್ಲ ನಿನ್ನಂತ ಗೆಳೆಯನು ನಾನು ಎಂದೂ,
ನೋಡುವವರು ಕೇಳುವರು ಇದು ಪ್ರೀತಿಯೆ ಎಂದು,
ಆದರೆ ನನಗೆ ಗೊತ್ತಿದೆ ನಮ್ಮ ಸ್ನೇಹವೂ ಪ್ರೀತಿಗಿಂತ ಮಧುರ ಎಂದು.
ನನ್ನ ತಪ್ಪುಗಳನ್ನು ತಿದ್ದಿದೆ ನೀ ನನ್ನ ಅಣ್ಣನ ಹಾಗೆ,
ನನ್ನ ದುಃಖ ಸಂತೋಷಗಳನ್ನು ಕೇಳಿದೆ ನೀ ನನ್ನ ಅಪ್ಪನ ಹಾಗೆ,
ಹೇಳಿಲ್ಲ ನನ್ನ ಕೃತಜ್ಞತೆಗಳನ್ನು ನಿನಗೆ ನಾನು ಇಲ್ಲಿಯವರೆಗೂ,
ಆಶಿಸುವೆ ನಮ್ಮ ಸ್ನೇಹ ಹೀಗೆ ಇರಲಿ ಕೊನೆಯವರೆಗೂ.
5. ತಂದೆಯ ಹೆಜ್ಜೆ
ನನ್ನ ಪ್ರೀತಿಯ ತಂದೆ, ನಾನು ಹೇಳುವ ಎಲ್ಲಾ ಮಾತನು ಕೇಳಿದೆ,
ನನ್ನ ಪುಟ್ಟ ಪ್ರಶ್ನೆಗಳಿಗೆ ನಿನ್ನ ಉತ್ತರ ಕೇಳಿ ಉತ್ಸಾಹ ನನಗೆ,
ನಿಮ್ಮ ಅಂಗೈಯಲ್ಲಿರುವ ನನ್ನ ಪುಟ್ಟ ಕೈಗಳು, ಅದೊಂದು ಖುಷಿಯಾದ ನೆನಪು,
ನಿಮ್ಮ ಪ್ರೋತ್ಸಾಹದಿಂದ ನಾನು ಮುಟ್ಟಿದೆ ನನ್ನ ಎಲ್ಲ ಕನಸು,
ನಾನು ಬೆಳೆದು ಕನಸುಗಳ ಬೆನ್ನಟ್ಟಿ ಮನೆ ಬಿಟ್ಟಿರಬಹುದು,
ನಾನು ಒಂಟಿ ಅನ್ನಿಸಿದಾಗ, ನೆನಪಾಯಿತು ನನ್ನಗೆ ನೀ ಇದ್ದೆ ಎಂದು,
ನಿಮ್ಮ ಯೋಗಕ್ಷೇಮಕ್ಕಾಗಿ ನಾನು ಪ್ರತಿದಿನ ದೇವರನ್ನು ಪ್ರಾರ್ಥಿಸುತ್ತೇನೆ,
ನಿಮ್ಮ ಹೆಜ್ಜೆಗಳನ್ನು ಅನುಸರಿಸುತ ನಾನು ನಿಮ್ಮಂತೆ ಇರಲು ಹೆಮ್ಮೆಪಡುತ್ತೇನೆ.
6. ಮರಲಿ ಪ್ರೀತಿಸು
ಮಾತೊಂದು ಕೊಟ್ಟಿರುವೆ ನಿನಗೆ ಅಂದು,
ನೀನು ಕಣ್ಣಿರು ಹಕದೆ ನೋಡಿಕೊಳ್ಳುವೆ ಎಂದು,
ಆದರೆ ನಿನ್ನ ದುಃಖಕ್ಕೆ ಕಾರಣ ನಾನೆ ಇಂದು,
ನನ್ನ ತಪ್ಪನ್ನು ಕ್ಷಮಿಸಿ ಆಡು ಮಾತೊಂದು.
ತಿಳಿಯಿತು ನನಗೆ, ನೀನಿಲ್ಲದೆ ಎಲ್ಲಾ ಶೂನ್ಯ ವೆಂದು,
ಭಾರವಾಗಿದೆ ಹೃದಯ, ನೀನಿಲ್ಲದ ಜೀವನದಿಂದ,
ಕರುಣೆ ತೋರಿಸಿ ಕೈಯನು ಹಿಡಿ ಪ್ರೀತಿಯಿಂದ,
ಸಂಪೂರ್ಣವಾಗುತ್ತೇನೆ ನಾನು, ಕೇವಲ ನಿನ್ನಿಂದ.
7. ನೀನು ಮಧುರ
ನಿನೊಂದಿಗೆ ಪ್ರತಿ ದಿನವೂ ಪ್ರೀತಿಯಲ್ಲಿ ಹೊಸ ಸಾಹಸವಾಗಿದೆ,
ನಿನ್ನ ನಗುವಿನಲ್ಲಿ ನನ್ನ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಂತಾಗಿದೆ,
ನನ್ನ ಮನದಲ್ಲಿ ಕುಣಿದಾಡುವ ಮಧುರ ಹಾಡು ನೀನು,
ನನ್ನ ಹೃದಯ ಆಳದಲ್ಲಿ ಬರೆದಿರುವ ಪ್ರೀತಿಯ ಕವಿತೆ ನೀನು.
ಕಾರ್ಮೋಡ ತುಂಬಿದ ಬದುಕಿಗೇ ನೀ ಬಂದೆ ಬೆಳಕಿನಂತೆ,
ನಿನೊಂದಿಗೆ, ಮೃದುವಾದ ತಂಗಾಳಿಯೂ ಮುದ್ಧಿಸುವಂತೆ ಅನಿಸಿದೆ,
ನನ್ನ ಖಾಲಿ ಜೀವನದಲ್ಲಿ ನೀನು ಸುಂದರ ಭವಿಷ್ಯವನ್ನು ಚಿತ್ರಿಸಿದೆ,
ನನ್ನ ಅಧ್ಯಾಯದ ಕೊನೆಯವರೆಗೂ ನಿನ್ನೊಂದಿಗೆ ಇರಲು ಬಯಸಿದೆ.
8. ನಿನಿರದೇ...
ನಿನ್ನೆ ಇದ್ದ ಹಾಗೆ ಯಿಂದು ನಾನಿಲ್ಲ,
ಈ ದೂರವ ನೆನೆದು ನಾ ಅಳುವುದಿಲ್ಲ,
ನಿನ್ನ ಹೆಸರನ್ನು ನಾನು ಕರೆಯುವುದಿಲ್ಲ,
ನಿನ್ನ ನೆನಪುಗಳು ನನನ್ನು ಬಿಡುವುದಿಲ್ಲ.
ನಿನ್ನ ಮುತ್ತಿನ ಮಾತಿನ ಅಲೆಯಲಿ ಹರಿದು ಹೋದೆ ನಾನಿಲ್ಲಿ,
ಆದರೆ ನಿನಿರದೇ ಕತ್ತಲೆಯು ಮೂಡಿದೆ ನನ್ನ ಜಗದಲ್ಲಿ,
ನನ್ನ ಪ್ರೀತಿ ತಲುಪುತ್ತದೆಯೇ ನಿನ್ನ ಹೃದಯ ವರೆಗೂ,
ನಿನಗಾಗಿ ಕಾಯುವೆ ನಾನು ಕೊನೆಯ ವರೆಗೂ.
9. ವೀರ, ನಿನಗೆ ಜೋಹರ್.
ವೀರರು ನೀವು ಜಗತ್ತಿನ ವಿಖ್ಯಾತ ರತ್ನಗಳು,
ನಮ್ಮ ದೇಶದ ಆದರ್ಶ ಮುಖ್ಯಸ್ಥರು,
ಕಷ್ಟದ ಕಾಲದಲ್ಲಿ ನೀವು ಹೆಜ್ಜೆಯನು ಹಿಡಿದು,
ಭೂಮಿಯ ಕಾಯೋ ಮೂಕ ಕಾವಲುಗಾರರು.
ರಕ್ಷಾಕವಚ ಧರಿಸಿ, ಬಂದೂಕು ಬಿಗಿದಿಡಿದು ಮುಂದೂಡುತ್ತನೇ,
ಅವನು ಕತ್ತಲೆಯಲ್ಲಿ ಹೆಜ್ಜೆ ಹಾಕಿ ಬೆಳಕನ್ನು ಹುಡುಕುತ್ತಾನೆ,
ಅವರ ಹೆಜ್ಜೆಗಳು ವಿದೇಶಿ ಭೂಮಿಯಲ್ಲಿ ಪ್ರತಿಧ್ವನಿಸುತ್ತವೆ,
ತನ್ನ ಕೈಗಳಿಂದ ಸ್ವಾತಂತ್ರ್ಯವನ್ನು ರಕ್ಷಿಸುತ್ತಾನೆ.
ಬಂಧು ಮಿತ್ರರನ್ನು ಬಿಟ್ಟು, ದೇಶಕ್ಕಾಗಿ ನಿಂತೇ ನೀ ಧೀರನಾಗಿ,
ರಕ್ತಪಾತವು ಹರಿಯುತ್ತಿದ್ದರೂ, ಹೋರಾಡಿದೆ ನೀ ನಮಗಾಗಿ,
ಜ್ವಾಲೆ ತುಂಬಿದ ಹೃದಯದ ಯೋಧ, ನಿನ್ನ ಕಣ್ಣು ತುಂಬಿದೆ ಧ್ವಜೆ,
ನಾವು ತಲೆಬಾಗಿ ನಿಲ್ಲುವೆವು ನಿಮ್ಮ ಶೌರ್ಯ ಸಾಹಸಗಳ ಮುಂದೆ.
10. ನಮ್ಮ ಊರು
ಯಂತ್ರ ಮತ್ತು ಕಾಂಕ್ರೀಟ್ ಗೋಪುರಗಳ ತುಂಬಿದ ಜಗತ್ತಿನಲ್ಲಿ,
ಮಂಜಿನ ಮುಂಜಾನೇಯ ಸುಂದರವಾದ ದೃಶ್ಯ ನಮ್ಮ ಊರಿನಲ್ಲಿ,
ಮಂಜಿನ ಪರದೆಯ ಮೂಲಕ ಸೂರ್ಯನ ಬೆಳಕು ಶೋಧಿಸುತ್ತಿದ್ದಂತೆ ದಳಗಳು,
ಹಕ್ಕಿಯ ರಾಗವು ಕೇಳಿ ತಂಪು ತಂಗಾಳಿಯ ಸೋಂಕುತ್ತ, ನಾಟ್ಯ ಮಾಡಿದವು ಬೆಳೆಗಳು.
ಜಾತ್ರೆಗಳನ್ನು ನೆಪವಾಗಿಟ್ಟುಕೊಂಡು ನಾವು ಊರಲ್ಲಿ ಖುಷಿಯಾಗಿ ಇರುತ್ತೇವೆ,
ನಾವು ಹುಲ್ಲುಹಾಸಿನ ಮೇಲೆ ಮಲಗಿ ನಕ್ಷತ್ರಗಳ ವೀಕ್ಷಿಸಲು ಬಯಸುತ್ತೇವೆ,
ಚಿನ್ನದಂತಹ ಮಕ್ಕಳ ನಗು ಬೀದಿಗಳಲ್ಲಿ ಪ್ರತಿಧ್ವನಿಸುತ್ತದೆ,
ಸರಳವಾದ ಮನೆಗಳು, ಆದರೆ ಸಂಸ್ಕೃತಿಯು ಪ್ರತಿಯೊಂದು ಭಾಗದಲ್ಲೂ ಕೆತ್ತಲಾಗಿದೆ.
For more heart touching poems in English : Click Here